ಚೆಂದುಟಿಯ ಪಕ್ಕದಲಿ – Chendutiya Pakkadali – Drama Movie

Movie: Drama

Director: Yogaraj Bhat
Lyrics: Yogaraj Bhat
Singer: Sonu Nigam
Music: V Harikrishna

ಚೆಂದುಟಿಯ ಪಕ್ಕದಲಿ, ತುಂಬ ಹತ್ತಿರ ನಿಂತು..ಗುರಿ ಇಟ್ಟು ಕಾಡಿಗೆಯ ಬೊಟ್ಟಿಡ್ಲಾ..?
ಒಂದೊಳ್ಳೆ ಬೈಯ್ಗುಳವ, ನೀ ನುಡಿಯುವ ಹಾಗೆ..ಅತಿ ತುಂಟ ಮಾತೊಂದ ನಾನಾಡ್ಲಾ..?
ಕಿಡಿಗೇಡಿ ಕನಸೊಂದ ಕಟ್ಟಿರ್ಲಾ..?
ತಡಮಾಡದೆ ಸಣ್ಣ ಮುತ್ತಿಡ್ಲಾ..?
ಇದು ಯಾವ್ದು ಹೇಳ್ದೇನೆ ಮುಚ್ಚಿಡ್ಲಾ..?

ಚೆಂದುಟಿಯ ಪಕ್ಕದಲಿ, ತುಂಬ ಹತ್ತಿರ ನಿಂತು..ಗುರಿ ಇಟ್ಟು ಕಾಡಿಗೆಯ ಬೊಟ್ಟಿಡ್ಲಾ..?
ಒಂದೊಳ್ಳೆ ಬೈಯ್ಗುಳವ, ನೀ ನುಡಿಯುವ ಹಾಗೆ..ಅತಿ ತುಂಟ ಮಾತೊಂದ ನಾನಾಡ್ಲಾ..?

ಈ ನಿನ್ನ ಹಾಡಿನ ಪೋಲಿ ಸ್ವರವಾಗುವೆನು.. ಹಾಡಿನೋಡೆನ್ನನು ಸ್ಮೈಲ್ ಆದ್ರು ಬರಲಿ..
ನಾಚಿಕೆಯ ನೆಪದಲ್ಲಿ ಒಡದಿರು ನನ್ನಿಂದ.. ನೀ ಮೂಡಿದ ಸಂಪಿಗೆಯ ಸ್ಮೆಲ್ ಆದ್ರು ಸಿಗಲಿ..
ಕೆನ್ನೆಯಲಿ ಕೆಂಪಾಗಿ ಉಳಿದಿರ್ಲಾ..
ಬೆನ್ನಿನಲಿ ಬೆವರಾಗಿ ನಾನಿರ್ಲಾ..
ಇದು ಯಾವ್ದು ಹೇಳ್ದೇನೆ ಮುಚ್ಚಿಡ್ಲಾ..?
ಚೆಂದುಟಿಯ ಪಕ್ಕದಲಿ..

ಒಮ್ಮೊಮೆ ಯೋಚಿಸುವೆ ಯಾತಕ್ಕೆ ನಾನಾದೆ.. ಎದೆಯೊಳಗೆ ಕುರ್ಚಿಯನು ಕೆತ್ತುವ ಬಡಗಿ..
ಇಬ್ಬನಿಯು ಸುಡುತಿಹುದು ತಂಗಾಳಿ ನಗುತಿಹುದು.. ಇನ್ನೆಷ್ಟು ಚಳಿಗಾಲ ಕಾಯುವುದೇ ಹುಡುಗಿ..
ಸ್ವಪ್ನಕ್ಕೆ ಬೆಡ್ ಶೀಟು ಹೊಚ್ಚಿರ್ಲಾ..
ಚಂದ್ರಂಗೆ ಮೊಂಬತ್ತಿ ಕೊಟ್ಟಿರ್ಲಾ..ಇದು ಯಾವ್ದು ಹೇಳ್ದೇನೆ ಮುಚ್ಚಿಡ್ಲಾ..?

ಬಿಗಿದಿಟ್ಟ ತಂಬೂರಿ ತಂತಿಯಂತಾಗಿರುವೆ..ತುಂಡು ಮಾಡೆನ್ನನು ಸೌಂಡ್ ಆದ್ರು ಬರಲಿ..
ನಿನ್ನ ತಲೆ ದಿಂಬಿನ..ಚಿತ್ತಾರವಾಗಿರುವೆ..ನಿನ್ನ ಕನವರಿಕೆಯಲಿ ಒಂದಾದರು ಸಿಗಲಿ..
ಸಿಗದಂಥ ಕೊನೆ ಸಾಲು ಬಿಟ್ಟಿರ್ಲಾ..
ಯಾವ್ದಕ್ಕೂ ಕೊನೆಗೊಂದು ಡಾಟ್ ಇಡ್ಲಾ..
ಇದು ಯಾವ್ದು ಹೇಳ್ದೇನೆ ಮುಚ್ಚಿಡ್ಲಾ..?

ಚೆಂದುಟಿಯ ಪಕ್ಕದಲಿ, ತುಂಬ ಹತ್ತಿರ ನಿಂತು..ಗುರಿ ಇಟ್ಟು ಕಾಡಿಗೆಯ ಬೊಟ್ಟಿಡ್ಲಾ..?
ಒಂದೊಳ್ಳೆ ಬೈಯ್ಗುಳವ, ನೀ ನುಡಿಯುವ ಹಾಗೆ..ಅತಿ ತುಂಟ ಮಾತೊಂದ ನಾನಾಡ್ಲಾ..?

Author: madhurtarang

Leave a Reply

Your email address will not be published. Required fields are marked *